Monday, October 5, 2015

ಸಮಾಜದ ಜಾಗೃತ ಸ್ಥಿತಿ ಪತ್ರಿಕೋದ್ಯಮ Journalism is the Aware of Society


                            ಸಮಾಜದ ಜಾಗೃತ ಸ್ಥಿತಿ ಪತ್ರಿಕೋದ್ಯಮ


        ಇಡೀ ಜಗತ್ತು ನಿದ್ರಿಸುತ್ತಿದ್ದರೆ ಪತ್ರಕರ್ತ ಎಚ್ಚರದಿಂದಿರುತ್ತಾನೆ. ಅವನ ಜಾಗೃತ ಮನಸ್ಸು ಸಮಾಜದ ಪ್ರತಿ ರಂಗದ ಬೆಳವಣಿಗೆಯ ಶಬ್ದವನ್ನು ಗ್ರಹಿಸುತ್ತಲೇ ಇರುತ್ತದೆ. ಜನಸಾಮಾನ್ಯರ ನೋವು ನಲಿವು ಬೇಡಿಕೆ ತೀರಿಕೆ, ಸಾಮಾಜಿಕ ಸ್ಥಿತಿಯ ಸ್ಪಷ್ಟ ಅನಾವರಣ ಮಾಡುವ ಪತ್ರಕರ್ತ ಕೇವಲ ಕಬುತರ್ ಅಲ್ಲ. ಅತ ದೇಶದ ಜಾಗೃತ ಪ್ರಜ್ಞೆಗೆ ಸಾಕ್ಷಿ ಮತ್ತು ಇಂತಹ ಪ್ರಜ್ಞೆಯ ಒಟ್ಟು ಪ್ರತಿನಿಧಿ ಪತ್ರಿಕೋದ್ಯಮ ಎಂದರೂ ತಪ್ಪಗಲಾರದು. ಕ್ರಿ.ಪೂ 59ನೇ ಶತಮಾನದಲ್ಲಿಯೇ ಸುದ್ದಿಯನ್ನು ಹಂಚುವ ಪರಿಕಲ್ಪನೆ ಜನರಿಗಿತ್ತು ರೋಮ್, ಇಟಲಿ ಯಲ್ಲಿ ಪ್ರಚಲಿತ ಸುದ್ದಿಯನ್ನು ಕೆತ್ತಿದ ಲೋಹದ ಅಥವಾ ಕಲ್ಲು ಬಂಡೆಗಳನ್ನು ನಗರದಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಇಡಲಾಗುತ್ತಿತ್ತು ಇವನ್ನು “ಆಕ್ಟಾ ಡ್ಯುಇರಾನ್” ಎಂದು ಕರೆಯುತ್ತಿದ್ದರು, 15 ನೇ ಶತಮಾನದ ಪುನರುಜ್ಜೀವನ ಅವಧಿ ಹೆತ್ತುಕೊಟ್ಟ ಮುದ್ರಣಯಂತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಗೆ ದಾರಿಮಾಡಿತು. ಪ್ರಪಂಚದ ಮೊದಲ ದಿನಪತ್ರಿಕೆ “ಡೈಲಿ ಕೌರಂಟ್” ಕ್ರಿಶ 1702ರಲ್ಲಿ ಪ್ರಕಟವಾಯಿತು. 1762ರಲ್ಲಿ ರೋಹ್ಡ್ ದ್ವೀಪಗಳಲ್ಲಿ ಪ್ರಕಟಗೊಂಡ “ದಿ ನ್ಯೂಪೂರ್ಟ ಮಕ್ರ್ಯುರಿ” ಪತ್ರಿಕೆಯ ಸಂಪಾದಕಿ ಆನ್ ಫ್ರಾಂಕ್ಲಿನ್ ವಿಶ್ವದ ಮೊದಲ ಮಹಿಳಾ ಸಂಪಾದಕಿ. 1780 ರಲ್ಲಿ ಭಾರತದ ಮೊಟ್ಟ ಮೊದಲ ವಾರ್ತಾ ಪತ್ರಿಕೆಯಾಗಿ “ದಿ ಬೆಂಗಾಲ್ ಗೆಜೆಟ್” ಆಗಸ್ಟನ್ ಹಿಕ್ಕಿ ರವರ ಸಂಪಾದಕತ್ವದಲ್ಲಿ ಪ್ರಕಟಿಸಲಾಯಿತು. ಅದೇ ವರ್ಷದಲ್ಲಿ ಪ್ರತಿ ಮುದ್ರಣದ 200 ಪ್ರತಿಗಳು ಮಾರಾಟವಾಗುತ್ತಿದ್ದವು. ತಮಿಳಿನ ಮೊದಲ ಪತ್ರಕೆಯಾಗಿ ಮದರಾಸು ಕೊರಿಯರ್, ಕೇರಳದ ಮೊದಲ ಪತ್ರಕೆಯಾಗಿ ದೀಪಿಕ ಪ್ರಕಟಗೊಂಡವು. 1843 ರಲ್ಲಿ ಹರಮನ್ ಮೊಂಗ್ಲಿಂಗ್ ನೇತೃತ್ವದಲ್ಲಿ ಕನ್ನಡದ ಮೊದಲ ದಿನಪತ್ರಿಕೆ “ಮಂಗಳೂರು ಸಮಾಚಾರ” ಪ್ರಕಟಗೊಂಡಿತು. 1950ರ ವೇಳೆಗೆ ದೇಶದಲ್ಲಿ 214 ದಿನಪತ್ರಿಕೆಗಳು ಅದರಲ್ಲಿ 44 ಪತ್ರಿಕೆಗಳು ಆಂಗ್ಲಭಾಷೆಯಲ್ಲಿ  ಪ್ರಕಟವಾಗುತ್ತಿದ್ದರೆ,  1990ರ ವೇಳೆಗೆ ಭಾರತದಲ್ಲಿನ ದಿನಪತ್ರಿಕೆಗಳ ಸಂಖ್ಯೆ 2,856ಕ್ಕೆ ಏರಿತು. ಭಾರತದ ಸ್ವಾಂತಂತ್ರ್ಯ ಆಂದೋಲನಕ್ಕೆ ಪತ್ರಿಕೋದ್ಯಮದ ಕೊಡುಗೆ ಅಪಾರ. ಎಷ್ಟೋ ಪ್ರತಿಕೆ ಹಾಗೂ ಪರ್ತಕರ್ತರು ಬ್ರಿಟೀಷ್ ಆಳರಸರ ಅವಕೃಪೆಗೆ ಒಳಗಾದ ಘಟನೆಗಳಿವೆ. ದೇಶ, ಜನ, ಭಾಷೆ, ಸಂಸ್ಕøತಿ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಎಚ್ಚರದ ಧ್ವನಿ ಎತ್ತಿ ಸಮಾಜವನ್ನು ಎಚ್ಚರಗೊಳಿಸಿ ಸಮಾಜದ ಧ್ವನಿಯಾಗಿ  ಕೆಲಸ ನಿರ್ವಹಿಸಿದ ಇತಿಹಾಸ ಪತ್ರಿಕೋದ್ಯಮಕ್ಕಿದೆ
. ಅದಕ್ಕೆಂತಲೆ ಇದನ್ನು ಸಂವಿಧಾನದ ನಾಲ್ಕನೆ ಅಂಗ ಎಂದಿರುವುದು. ಪತ್ರಿಕೋದ್ಯಮದ ಬೆಳವಣಿಗೆಯ ಪ್ರತಿ ಹೆಜ್ಜೆ ಸಮಾಜವನ್ನು ಅಭಿವೃದ್ಧಿಗೆ ಕರೆದೊಯ್ಯುವ ತಿರುವು ನೀಡಲು ಪ್ರಯತ್ನಿಸಿದೆ.  ಸ್ಥಳೀಯ, ದೇಶ-ವಿದೇಶ, ವಾಣಿಜ್ಯ, ಆರೋಗ್ಯ, ಶಿಕ್ಷಣ, ಕ್ರೀಡೆ ಮತ್ತು ಮನೋರಂಜನೆ ವ್ಯಕ್ತಿಯ ಎಲ್ಲಾ ಆಯಾಮಗಳಿಗೆ ಬೇಕಾದ ಮಾಹಿತಿ ಮನೆಬಾಗಿಲಿಗೆ ತಲುಪಿಸುವದರೊಂದಿಗೆ ಪ್ರಜಾಪ್ರಭುತ್ವದ ವಾಸ್ತವತೆಯನ್ನು ಕನ್ನಡಿಯಂತೆ  ಅನಾವರಣ ಮಾಡುತ್ತದೆ. ಪತ್ರಿಕೋದ್ಯಮಕ್ಕೆ ತ್ಯಾಗದ ಇತಿಹಾಸವಿದೆ. ಜವಾಬ್ದಾರಿಯುತ ಕರ್ತವ್ಯದಲ್ಲಿರುವ ಪತ್ರಕರ್ತರು ತಮ್ಮ ಪ್ರಾಣ ಪಣಕಿಟ್ಟು ದುಡಿದಿದ್ದಾರೆ. ಪತ್ರಿಕೋದ್ಯಮದ ಇತಿಹಾಸ ಸಾವಿರಾರು ಪ್ರಾಮಾಣಿಕ ಕಾರ್ಯನಿರತ ಪತ್ರಕರ್ತರ ಕಗ್ಗೊಲೆಯ ಪ್ರಕರಣಗಳನ್ನೂ ಕಂಡಿದೆ. ವಿಶ್ವದಲ್ಲಿ 1992 ರಿಂದೀಚೆಗೆ  ಸುಮಾರು 1500ಕ್ಕೂ ಹೆಚ್ಚು ಪ್ರೇರಣೆ ಸಾಬೀತಾದ ಕೊಲೆ ಪ್ರಕರಣಗಳಿವೆ. ಪ್ರೇರಣೆ ಸಾಬೀತಾಗದ ಅದೆಷ್ಟೋ ಕೊಲೆ ಪ್ರಕರಣಗಳು ಇನ್ನೂ ನ್ಯಾಂiÀiಕ್ಕಾಗಿ ಕೋರ್ಟಿನಿಂದ ಕೋರ್ಟಿಗೆ ಅಲೆಯುತ್ತಿವೆ.


ವರ್ಷ  ವಿಶ್ವದಲ್ಲಿ ಒಟ್ಟು ಪತ್ರಕರ್ತರ ಕೊಲೆ    ಭಾರತದ ಪರ್ತಕರ್ತರು
1992              44              02
2002              21              01
2010              44              01
2012              74              02
2013              70              03
PEN IS MIGHTIER THAN SWARD

(ಪ್ರೇರಣೆ ಸಾಬೀತಾದ ಪ್ರಕರಣಗಳು ಮಾತ್ರ)

ಪೇಪರ್ ಹಂಚುವ ಕಾರ್ಮಿಕನಿಂದ ಹಿಡಿದು ಬಿಡಿಸುದ್ದಿ ಸಂಗ್ರಹಕಾರ, ಪತ್ರಕರ್ತ, ಸಂಪಾದಕ, ಮುದ್ರಣ ತಂತ್ರಜ್ಞ ಹಾಗೂ ವ್ಯವಸ್ಥಾಪಕ ನಾನಾ ನೌಕರರ ಶ್ರಮದಿಂದ ಪತ್ರಿಕೋದ್ಯಮ ಸಾಗುತ್ತಿದೆ. ಈ ರಂಗದಲ್ಲಿ ದುಡಿಯುವ ಎಷ್ಟೋ ನೌಕರರು ಕನಿಷ್ಟ  ವೇತನ. ಬಸ್ ಪಾಸ್, ಆಶ್ರಯ, ಪಡಿತರ ಸೌಲಭ್ಯದಿಂದಲೂ ವಂಚಿತರಾಗಿದ್ದರೆ.  ಈ ಬಗ್ಗೆ ಮಜೀತಿ ಅಯೋಗ ಬಹು ವರ್ಷದ ಹಿಂದೆ ಸರಕಾರಕ್ಕೆ ವರದಿ ಸಲ್ಲಿಸಿದೆ. ಬಹುಶಃ ಮುಂದಿನ ದಿನಗಳಲ್ಲಿ ಈ ಅಯೋಗದ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನೀಡುವ ತೀರ್ಪು ಪತ್ರಿಕೋದ್ಯಮದ ಎಲ್ಲಾ ನೌಕರರಿಗೂ ಹರ್ಷ ತರಲಿ ಎಂದು ಹಾರೈಸೋಣ.
                     
 ಗೌತಮ್ . ಪಿ. ರಾಠಿ
 ಮೊಬೈಲ್ : 8553111700
 ಇಮೇಲ್:- gouthamrati@gmail.com



No comments:

Post a Comment

Thank You and have a great time