Thursday, October 1, 2015

About Child marriage in India, Impact of child marriage system in India

ಬಾಲ್ಯ ವಿವಾಹ ಭಾರತದ ಅಭಿವೃದ್ಧಿಗೆ ಕಂಟಕ Child marriage is the main cause to being India backward


ರಾಜಾ ರಾಮ್ ಮೋಹನ್ ರಾಯ್ ರವರು ಬಾಲ್ಯವಿವಾಹ ತಡೆಗೆ 18ನೇ ಶತಮಾನದಲ್ಲಿ ತೀರ್ವ ಹೋರಾಟ ನಡೆಸಿದ್ದರು. ಅದರ ಫಲವಾಗಿ 1833ರಲ್ಲೇ ಬಾಲ್ಯವಿವಾಹಕ್ಕೆ ವಿರುದ್ದ ಕಾನೂನು ಆಯಿತು, ಆದರೆ ಇಂದಿಗೂ ಈ ಅನಿಷ್ಟ ಪದ್ದತಿ ನಿರ್ಮೂಲನೆಯಾಗಿಲ್ಲಾ. ಭಾರತದ ಅಭಿವೃದ್ಧಿಗೆ ಈ ಪದ್ದತಿಯೇ ಕಂಟಕ ಎಂಬ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ!.
1989 ರಲ್ಲಿ ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಮಾಡಿಕೊಂಡಿತು ಈ ಒಡಂಬಡಿಕೆಗೆ ಭಾರತ ಸರ್ಕಾರ ಸಹಿಹಾಕಿದ್ದು 1992 ರಲ್ಲಿ. ಮಕ್ಕಳು ಎಂದರೆ ತಾಯಿಯ ಗರ್ಭದಲ್ಲಿ ಬ್ರೂಣ ಪ್ರಾರಂಭವಾದಾಗಿನಿಂದ  18 ವರ್ಷದ ಒಳಗಿನ ಯಾವುದೇ ಲಿಂಗಬೇಧವಿಲ್ಲದ ಮಾನವ ಜೀವಿ ಎಂದು ವ್ಯಾಖ್ಯಾನಿಸಿದ್ದು, ಮಕ್ಕಳಿಗೆ ಬದುಕುವ ಹಕ್ಕು, ಉತ್ತಮ ಶಿಕ್ಷಣ ಪಡೆಯುವ ಹಕ್ಕು, ರಕ್ಷಣೆ ಪಡೆಯುವ ಹಕ್ಕು, ಭಾಗವಹಿಸುವ ಹಕ್ಕು,  ಮತ್ತು ವಿಕಾಸಹೊಂದುವ ಹಕ್ಕು ಹೀಗೆ ವಿಷೇಶವಾದ ಹಕ್ಕುಗಳನ್ನು ಈ ಒಡಂಬಡಿಕೆ ತಂದುಕೊಟ್ಟಿತು.  ಬ್ರೂಣ ಹತ್ಯೆ ಕಾನೂನಿಗೆ ವಿರುದ್ಧ ಎಂದು ತಾಯಿಯ ಗರ್ಭದಲ್ಲಿದ್ದಾಗಲೇ ಮಗು ತನ್ನ ಬದುಕುವ ಹಕ್ಕನ್ನು ಚಲಾಯಿಸುತ್ತದೆ ಆದರೆ ಜನಿಸಿದ ನಂತರ ತನಗೆಂದೇ ಇರುವ ಈ ವಿಶೇಷ ಹಕ್ಕುಗಳ ಅರಿವಿಲ್ಲದೇ ತನ್ನ ಜೀವನವನ್ನು ಬಲಿಕೊಡುತ್ತದೆ. ಈ ಒಡಂಬಡಿಕೆ ಅಂಗೀಕರಿಸಿ ಎರಡು ದಶಕ ಕಳೆದರೂ ಭಾರತ ಬಾಲ್ಯವಿವಾಹ ಮತ್ತು  ಬಾಲಕಾರ್ಮಿಕ ಪದ್ದತಿಯಿಂದ ಮುಕ್ತವಾಗಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಯ ಹೊಣೆ ಹೊತ್ತ ನಾನಾ ಕಾನೂನುಗಳನ್ನು ಜಾರಿಗೆತರಲು  ಸರ್ಕಾರಿ ಮತ್ತು ಸರ್ಕರೇತರ ಸಂಸ್ಥೆಗಳು ಶ್ರಮಿಸುತ್ತಿವೆ, ಆದರೂ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಘಟಿಸುತ್ತಲೇ ಇವೆ.  
ಹಿಂದಿನ ಕಾಲದಿಂದಲೂ ಈ ಅನಿಷ್ಟ ಪದ್ದತಿಯಗಳು ಚಾಲ್ತಿಯಲ್ಲಿದ್ದು, ಆಧುನಿಕ ಯುಗದಲ್ಲಿ ಮುಂದುವರೆದು ಉತ್ತಮ ಸಮಾಜ ನಿರ್ಮಾಣದ ಅದರ್ಶಕ್ಕೆ ಧಕ್ಕೆ ತಂದಿವೆ.  ಈ ಅಪಾಯಕಾರಿ ಪದ್ದತಿ ಮಕ್ಕಳ ಸಾಮಥ್ರ್ಯಕ್ಕಿಂತಲೂ ಹೆಚ್ವಚಿನ ಹೊಣೆ ಹೊರಿಸಿ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಸಹಜ ವಿಕಸನಕ್ಕೆ ಮಾರಕವಾಗಿವೆ. ಅಲ್ಲದೆ ತಾಯಂದಿರ ಮರಣ, ಶಿಶು ಮರಣ, ಅಪೌಷ್ಠಿಕತೆಗೆ ಜನ್ಮನೀಡಿದೆ. ಈ ಬಗ್ಗೆ ದೃಶ್ಯ ಮಾಧ್ಯಮಗಳು ಅರಿವು ಮೂಡಿಸುವ ಪ್ರಯತ್ನಮಾಡಿದರೂ. ಪ್ರಯತ್ನಕ್ಕೆ ಬೇಕಾದ ವಿಶಾಲ ಆಯಾಮ ಪಡೆಯುವಲ್ಲಿ ಸಫಲವಾಗಿಲ್ಲ.  ಏಕೆಂದರೆ ಈ ಸಮಸ್ಯೆಯ ಪರಿಹಾರದ ದಾರಿಯಲ್ಲಿ ಹೊಸ ಸಾವಾಲುಗಳು ತಲೆ ಎತ್ತಿವೆ.
2006ರ ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ 21ವರ್ಷದ ಒಳಗಿನ ಹುಡುಗ ಹಾಗೂ 18 ವರ್ಷದ ಒಳಗಿನ ಹುಡುಗಿಯ ನಡುವಿನ ಅಥವಾ ಇಬ್ಬರಲ್ಲಿ ಒಬ್ಬರು ನಿಗಧಿತ ವಯಸ್ಸಿನೊಳಗಿದ್ದರೂ ಇಂತಹ ಮದವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಲು ಪ್ರಾಥಮಿಕ ಶಿಕ್ಷಣದ ಹಂತದಲ್ಲೆ ಮಕ್ಕಳಿಗೆ ಎಂಟತ್ತು ಅಂಕಗಳಿಗೆ ಪ್ರಬಂಧ ರಚಿಸುವ ವಾಡಿಕೆ ಇದೆ. ಆದರೆ ಇದನ್ನು ಜಾರಿಗೆ ತರುವ ಪಾಲಕರಿಗೆ ಯಾವ ಅರಿವಿದೆ ಎಂಬುದು ಮುಖ್ಯ. ಇದಕ್ಕೆ ಬಡತನ, ನಿರುದ್ಯೋಗ ನೇರ ಕಾರಣ ಎನ್ನುವುದು ಸಹಜ. ಆದರೆ ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿರುವ ಮಕ್ಕಳÀ ಅಜ್ಜಿ ಮುತ್ತಜ್ಜಿಯರೂ ಬಾಲ್ಯವಿವಾಹವಾದವರೇ ಎನ್ನುವುದು ಸತ್ಯಸಂಗತಿ!. ಆಕುಟುಂಬದ ಬಡತನ ನಿರುದ್ಯೋಗದ ನಿರ್ಮೂಲನೆಗೆ   ಎರಡು ಮೂರು ತಲಮಾರಿನ ಮಕ್ಕಳು ಈ ಅನಿಷ್ಟ ಪದ್ದತಿಗೆ ಬಲಿಯಾಗಬೇಕೆ? ನಿಜವಾದ ಕಾರಣ ಎಂದರೆ ಅವರಲ್ಲಿರುವ ಅಜ್ಞಾನ ಅಷ್ಟೇ!.
ಸಮಾದಲ್ಲಿರುವ ಮೂಢನಂಬಿಕೆ ಈ ಪದ್ದತಿಯ ಜೀವಂತಿಕೆಗೆ ಕಾರಣವಾಗಿದೆ. ಚಾಮರಾಜ ನಗರ ಜಿಲ್ಲೆಯ ಉಪ್ಪಾರ ಸಮುದಾಯದ ಪ್ರಕಾರ 18ವರ್ಷ ತುಂಬಿದ ನಂತರ ಹೆಣ್ಣು ಮಕ್ಕಳ ಮದುವೆಯಾಗುವುದು ಕಷ್ಟಸಾಧ್ಯ ಎಂಬ ಮೂಢನಂಬಿಕೆಗೆ ಹಲವಾರು ಅಪ್ರಾಪ್ತ ಮಕ್ಕಳು ಬಲಿಯಾಗಿದ್ದಾರೆ. ಧಾರವಾಡ ಹಾಗೂ ಬೆಳಗಾಂ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಗುಜ್ಜರಿ ಮದುವೆ. ವೃದ್ಧರಿಗೆ ಮದುವೆ ಎಂಬ ಮಾನವ ವಿರೋಧಿ ಸಂಪ್ರದಾಯಗಳು. ಇನ್ನೊಂದು ಅಂಶವೆಂದರೆ, ಪರುಷ ಪ್ರಾಧಾನ್ಯತೆಯ ಪ್ರಜ್ಞೆ ಸಮಾಜವನ್ನು ಆಳುತ್ತಿದ್ದು, ಹೆಣ್ಣನ್ನು ಕೀಳಾಗಿ ಕಾಣುವ ತುಚ್ಚ ಭಾವನೆ ಬಾಲ್ಯ ವಿವಾಹಕ್ಕೆ ಕಾರಣವಾಗಿದೆ. ಮಗಳು ದೊಡ್ಡವಳಾದ(ರುತುಮತಿ) ತಕ್ಷಣ ಮದುವೆ ಮಾಡಿಬಿಡಬೇಕೆಂಬ, ಮಗಳು ಖರ್ಚಾದರೆ ಸಾಕು ಎಂಬ ತುರ್ತು ಭಾವನೆ ಈ ಅನಿಷ್ಟಕ್ಕೆ ಕುಮ್ಮಕ್ಕು ನೀಡಿವೆ. ಸಾಮೂಹಿಕ ವಿವಾಹಗಳಲ್ಲಿ ಇಂಥಹ ಸಂದರ್ಭಗಳು ಕಾಣ ಸಿಗುತ್ತವೆ. ಅನಿಷ್ಟದ ದುಷ್ಪರಿಣಾಮದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಜನಾಂದೋಲದ ಅಗತ್ಯವಿದೆ.
ಬಾಲ್ಯವಿವಾಹದಿಂದ ಮಕ್ಕಳ ಹಕ್ಕು ಉಲ್ಲಂಘಟನೆ ಅಷ್ಟೆಅಲ್ಲ, ಮಗುವಿನ ಬೌದ್ಧಿಕ, ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಭಾಷಾ ಬೆಳವಣಿಗೆ ಕುಂಟಿತಿಗೊಂಡು, ಅಂಗಾಂಗ ಬೆಳೆಯದ ಸದೃಢ ಬೆಳೆವಣಗೆ ಸಾಧ್ಯವಿಲ್ಲ.  ಇದರಿಂದ ತಾಯಂದಿರು ಕಷ್ಟಕರ ಹೆರಿಗೆ, ಅಧಿಕ ರಕ್ತಸ್ರಾವ, ಮರಣ ಹೆಚ್ಚುತ್ತದೆ. ರಾಜ್ಯದಲ್ಲಿ 21% ತಾಯಂದಿರ ಮರಣವಾಗುತ್ತಿದೆ. ಶಿಶು ಮರಣ  ಹೆಚ್ಚುತ್ತವೆ. ಮುಖ್ಯವಾಗಿ ಬಾಲ್ಯವಿವಾಹಕ್ಕೆ ಒಳಗಾಗುವ ಹೆಣ್ಣು ಮಕ್ಕಳು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೊನೆಗೆ ದೇಶದ ಅಭಿವೃದ್ಧಿಗೆ ಪೂರಕವಾದ ಮಾನವ ಸಂಪನ್ಮೂಲದ ಅಭಿವೃದ್ಧಿ ಮಾರಕವಾಗುತ್ತದೆ.
2006ರ ಕಾಯ್ದೆ,  ಅನೇಕ ಕಾರ್ಯನಿರತ ಸರ್ಕಾರಿ ನೌಕರರನ್ನು ಬಾಲ್ಯ ವಿವಾಹ ನಿಷೇಧಾದಿಕಾರಿಗಳನ್ನಾಗಿ ಮಾಡಿದೆ. ಗ್ರಾಮಗಳ ಲೆಕ್ಕಾಧಿಕಾರಿ. ಕಂದಾಯ ನಿರೀಕ್ಷಕ. ಶಾಲಾ ಮುಖ್ಯೋಪಧ್ಯಾಯರಿಂದ ಹಿಡಿದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶೀಲ್ದಾರರು, ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಸಹ ಬಾಲ್ಯವಿವಾಹ ನಿಷೇಧಾಧಿಕಾರಿಗಳಾಗಿರುತ್ತಾರೆ. (ಸರ್ಕಾರಿ ಆಧಿಸೂಚಿ  ಸಂಖ್ಯೆ: WCD 377 SWW 2004 Dated:02.05.2008) ಬಾಲ್ಯ ವಿವಾಹ ಮಾಡಿದ ತಂದೆ, ತಾಯಿ, ಸಂಬಂಧಿಕರು, ಪುರೋಹಿತರು, ಮದುವೆಗೆ ಸಾಕ್ಷಿಯಾಗುವ ಎಲ್ಲರಿಗೂ ಒಂದು ಲಕ್ಷ ರೂಪಾಯಿ ದಂಡ ಹಾಗೂ ಎರಡು ವರ್ಷಗಳ ಶಿಕ್ಷೆ ಎಂದು ಹೇಳಿದೆ. ಭಾರತ ಸರ್ಕಾರ ಪ್ರಜೆಗಳು ಈ ರೀತಿ ಅಜ್ಞಾನದಲ್ಲಿ ಮುಳುಗಬಾರದೆಂದು ಅನೇಕ ಕಾನೂನುಗಳನ್ನು ಮಾಡಿದರೂ, ಮೊದಲು ಜನತೆಯ ಮನಸ್ಸಿನಾಳಕ್ಕೆ ಬಾಲ್ಯವಿವಾಹ  ಅನೇಕ ದುಷ್ಪರಿಣಾಮಗಳನ್ನು  ತಂದೊಡ್ಡುವ ಕ್ರೂರ ಪದ್ದತಿ ಎಂಬ ವಿಷಯ ಭದ್ರವಾದಾಗ ಮತ್ತು ಪ್ರತಿಯೊಬ್ಬ ನಾಗರಿಕನೂ ಸಹ ಬಾಲ್ಯವಿವಾಹದ ವಿರುದ್ಧ ಸರ್ಕಾರದ ಕೈಜೋಡಿಸಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನಾಂದಿ ಹಾಡಿದಂತೆ

ಇಂದಿನ ಮಕ್ಕಳು ಇಂದಿನ ಪ್ರಜೆಗಳೇ, ಬಾಲ್ಯವಿರುವುದು ಸವಿಯಲು, ಸವಿಯಲು ಬಿಡಿ, ಸಾಯಲು ಅಲ್ಲ