Monday, September 28, 2015

ಡಿಜಿಟಲ್ ಇಂಡಿಯಾ Digital India A story

ಡಿಜಿಟಲ್ ಇಂಡಿಯಾ  Digital India A story

ಒಂದಾನೊಂದು ಕಾಲದಲ್ಲಿ (ಕ್ರಿಶ 2015) ಭಾರತವೆಂಬ ಭೂಕಂಡದಲ್ಲಿ 150 ಕೋಟಿ ಅಜ್ಞಾನದ ಕತ್ತಲೆಯಲ್ಲಿ ಮುಳುಗಿದ ಇಲಿಗಳಿದ್ದವು. ಆಗಾಗ ಬಂದು ಭೇಟಿ/ಬೇಟೆ ಮಾಡುತ್ತಿದ್ದ ಬಿಳಿಯ ಬೆಕ್ಕು ಇಲಿಗಳ ಜೀವನದ ಜೊತೆಗೆ ಚಿನ್ನಾಟವಾಡುತ್ತಿತ್ತು. ಬೆಕ್ಕು ಬಂದೊಡನೇ ಜೀವಭಯದಿಂದ ಹೆದರಿ ಜಾಗೃತಗೊಳ್ಳುತ್ತಿದ್ದ ಇಲಿಗಳು ತಮ್ಮನ್ನೂ ಶಕ್ತಿಶಾಲಿಯನ್ನಾಗಿ ಮಾಡೆಂದು ಇಲಿ ರಾಜನಿಗೆ (ಮೋದಿ) ಮನವಿ ಇಟ್ಟವು. ಆಗ ಇಲಿರಾಜ ಇಲಿಗಳು ಶಕ್ತಿಶಾಲಿಯಾದರೆ ಬೆಕ್ಕಿನೊಡನೆ ತಾನು ಮಾಡಿಕೊಂಡ ಒಪ್ಪಂದಗಳೆಲ್ಲಾ ತಲೆಕೆಳಗಾಗುತ್ತವೆ ಎಂಬ ಭಯದಿಂದ “ಹೆದರಬೇಡಿ ನಾನು ನಿಮ್ಮನ್ನು ರಕ್ಷಿಸಲು (ತಾತ್ಕಾಲಿಕವಾಗಿ) ಉಪಾಯವೊಂದನ್ನು ಹುಡಿರುವೆ” ಎಂದು ಹೇಳಿ ಯೋಜನೆಯೊಂದನ್ನು ವಿವರಿಸಿತು (ಡಿಜಿಟಲ್ ಇಂಡಿಯಾ) ಬೆಕ್ಕು ಬಂದರೂ ಸರಿ ಬಾರದಿದ್ದರೂ ಸರಿ ಪ್ರತಿ ದಿನ ಮುಂಜಾನೆ ದೊಡ್ಡ ಬಟ್ಟಲಿನ ತುಂಬಾ ಬೆಣ್ಣೆಯನ್ನು ತುಂಬಿ ಹೊಸ್ತಿಲಿನ ಮುಂದೆ ಇರಿಸತೊಡಗಿತು. ಅಂದಿನಿಂದ ಬೆಕ್ಕು ಹೊಸ್ತಿಲಿನ ಮುಂದೆ ಬಂದು ಬೆಣ್ಣೆಯ ನೆಕ್ಕಿ ಸಂತೃಪ್ತಗೊಂಡು ಇಲಿ ರಾಜನಿಗೆ ಶುಭಕೋರಿ ಹೋಗುತ್ತಿತ್ತು. ಬೆಕ್ಕಿನೊಡನೆ ಕಷ್ಟಸುಖಗಳನ್ನು ಮಾತಾಡುತ್ತಾ ಸಫಾರಿ ತೊಟ್ಟ  ಬಿಳಿ ಗಡ್ಡದ ಮುದಿ ಇಲಿರಾಜ ಬೆಕ್ಕಿನ ಎಂಜಲು ತಿಂದು ಖುಷಿ ಪಡುತ್ತಿತ್ತು.

Digital IndiaOnce upon a time (AD 2015) 150 crore Indians have sunk in the darkness of ignorance. A white Cat often to visit / hunting with mice’s life. All mice requested to their mighty King (MODI) to make them as strong as the white cat. After listening the request of mice the king turned in tension of breaking the commitments between the cat and him.  The king replied to mice that, "don’t I have an idea to protect you from that dirty cat.” Then described (Digital India). If the cat comes, we should offer a bowlful of ghee and put right in front of the threshold every early in the morning. Since then, the cat comes and has butter. The safari wearing   mice’s king was used to chat and after enjoys eating the cat's leftovers.