Wednesday, September 2, 2015

ನರ ಇಂದ್ರ NARA INDRA

ನರ ಇಂದ್ರ

ಬೃಂದಾವನವನ್ನು
ಅಮರ ಆಹುತಿ ಮಾಡ ಹೊರಟ
ಈ ನರ ಇಂದ್ರ
ಕಳ್ಳ ಕಾಕರ ಕೂಟದ ಶೃಂಗ
ಮನ್ ಕೀ ಬಾತ್ ನಲ್ಲಿ,
ಮನಸುಗಳ ಪ್ರಶ್ನೆಗೆ ಉತ್ತರಿಸ್ಲಾಗದ ಹೇಡಿ
ಹೇಸಿತನ ಮುಚ್ಚಿಡಲು
ಬಾಯಿಗಪ್ಟೇ ಕೆಲಸ ನೀಡಿ
ಬಡಬಡಿಸಿದವ
ಕಳೆ ಕೀಳಬೇಕಿದ್ದ ಸ್ವಚ್ಛ ಭಾರತ ಚಸ್ಮಾ
ಜೇಬಿನ ಮೂಲೆಗೆ ತುರುಕಿ,
ಪೊರಕೆ ಹಿಡಿದು ಕಸದ ಮುಂದೆ ಪೂಸ್ ಕೊಟ್ಟವ
ದೇಶದುದ್ದಕ್ಕೂ ಅಧಿಕಾರಿ ವಲಯಕ್ಕೆ
ತುರುಕೆ ಇಟ್ಟವ
ಸ್ವಿಸ್ ನ ಕಪ್ಪು ಹಣ ಮೂಸಿ,
ಮೂಗುಮುರಿದು,
ಜಾಲಾಡಲು ತ್ರಾಣ ವಿಲ್ಲದೇ
ಹುದುಲಿನಲ್ಲಿ ಸಿಕ್ಕು ನಿತ್ರಾಣಗೊಂಡವ !
ತಂದನಪ್ಪ ಕಾಯ್ದೆ,
ಭೂ ಸ್ವಾದೀನ ಹೊಸ ಕಾಯ್ದೆ.
ಭೂಮಿ ಸ್ವ ಅಧೀನ್ವೋ?
ಪರಕೀಯರಧೀನವೋ?
ಅನ್ನ ಬಿತ್ತುವ ಕೈತುಂಬ ಸಾಲ ತುಂಬಿ
ಪ್ರತಿಮನೆಯ ಅಂಗಳ್ದಲಿ
ಆಕ್ರಂದನವ ಬಿತ್ತಿದವ !
ನೀಣು ಕುಡಿಕೆಗೆ ರೈತರ ಕತ್ತು ನೀಡಿದವ
ಸಾವನ್ನೆ ರಾಜಕೀಯ ಲಾಂಛನ್ ಮಾಡಿಕೊಂಡವ.
ಮಂಜು ಸರಿಸಿ ನಕ್ಕ ಹಗಲ ತಿರುಕ
ಪಶ್ಚಿಮಕ್ಕೆ ತಿರುಗಿ ಕೆಂಪು ಕಕ್ಕಿ ಹೇಳಿದ
ಇದೇ ನಿಮ್ಮ ಸುಖ ಶಾಂತಿಯ ಮಂತ್ರ
ಆಗಬೇಕಿರುವುದು ರಕ್ತ ಸಿಕ್ತ ಕ್ರಾಂತಿಯೇ?
ಅಲ್ಲ ಅಲ್ಲ ಹೊಮ್ಮಬೇಕಿದೆ
ಕೆಂಬಾವುಟದ ಪ್ರಖರ ಕಾಂತಿ ||
- ಗೌತಮ್ ಪಿ ಆರ್
8553111700
ದಿನಾಂಕ: 12-09-2015ರಂದು ಭಾನುವಾರ ಸಮಾಜ ವಿಜ್ಞಾನ ವೇದಿಕೆ, ಕುರುಗೋಡು ಇವರು ಆಯೋಜಿಸಿದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಾಚನ ಮಾಡಲಾಗಿದೆ.